Saturday, November 6, 2021

 ದಿನಾಂಕ: ೩೦.೧೦.೨೦೨೧ ರಂದು ಬಂಜಾರ ಭಾಷಾಭಿವೃದ್ಧಿ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ಮಧ್ಯಾಹ್ನ ೨:೩೦ ಕ್ಕೆ ತಜ್ಞರ ಸಲಹಾ ಸಮಿತಿ ಸಭೆ ನಡೆಯಿತು.














ಸಭೆಯಲ್ಲಿ ಭಾಗವಹಿಸಿದವರು:

೧. ಡಾ. ಸ.ಚಿ. ರಮೇಶ, ಮಾನ್ಯ ಕುಲಪತಿಯವರು, ಕ.ವಿ.ಹಂ.             :ಅಧ್ಯಕ್ಷರು

೨. ಶ್ರೀ. ಚಂದ್ರ ನಾಯ್ಕ.ಯು, ವ್ಯವಸ್ಥಾಪಕ ನಿರ್ದೇಶಕರು,            :ವಿಶೇಷ ಆಹ್ವಾನಿತರು

       ತಾಂಡಾ ಅಭಿವೃದ್ಧಿ  ನಿಗಮ ನಿಯಮಿತ, ಬೆಂಗಳೂರು.

೩. ಡಾ. ಬಿ.ಕೆ. ರವೀಂದ್ರನಾಥ, ಪ್ರಾಧ್ಯಾಪಕರು, ಮೈಸೂರು                              :ಸದಸ್ಯರು

       ವಿಶ್ವವಿದ್ಯಾಲಯ, ಮೈಸೂರು.  

೪. ಡಾ. ಶಾಂತ ನಾಯ್ಕ, ಪ್ರಾಧ್ಯಾಪಕರು, ವಿಜಯನಗರ ಶ್ರೀ ಕೃಷ್ಣದೇವರಾಯ  :ಸದಸ್ಯರು

        ವಿಶ್ವವಿದ್ಯಾಲಯ, ಬಳ್ಳಾರಿ.

೫. ಡಾ. ಡಿ. ಪಾಂಡುರ0ಗಬಾಬು, ಮುಖ್ಯಸ್ಥರುಕನ್ನಡ ಭಾಷಾಧ್ಯಯನ            :ಸದಸ್ಯರು

         ವಿಭಾಗ,ಕವಿಹಂ.     

೬. ಡಾ. ಅಶೋಕಕುಮಾರ್ ರಂಜೇರೆ, ಪ್ರಾಧ್ಯಾಪಕರು, ಭಾಷಾಧ್ಯಯನ            :ಸದಸ್ಯರು

        ವಿಭಾಗ,ಕವಿಹಂ.  

೭. ಡಾ. ಪಿ. ಮಹಾದೇವಯ್ಯ, ಪ್ರಾಧ್ಯಾಪಕರು, ಭಾಷಾಧ್ಯಯನ                         :ಸದಸ್ಯರು

       ವಿಭಾಗ, ಕವಿಹಂ. 

೮. ಡಾ.ಎಸ್.ವೈ.ಸೋಮಶೇಖರ್, ಉಪಕುಲಸಚಿವರು(ಶೈಕ್ಷಣಿಕ), ಕವಿಹಂ.        :ಸದಸ್ಯರು

೯. ಡಾ. ರಮೇಶ ನಾಯ್ಕ, ಯೋಜನ ಸಂಯೋಜಕರು, ತಾಂಡಾ     :ವಿಶೇಷ ಆಹ್ವಾನಿತರು

         ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು.

೧೦. ಡಾ. ಸಣ್ಣರಾಮ, ನಿರ್ದೇಶಕರು, ಬಂಜಾರ ಭಾಷಾಭಿವೃದ್ಧಿ      :ಸದಸ್ಯ ಸಂಚಾಲಕರು

       ಅಧ್ಯಯನಕೇ0ದ್ರ, ಕವಿಹಂ.

ಗೈರಾದವರು:

೦೧. ಡಾ. ರೇಣುಕ ನಾಯ್ಕ, ಸಹಾಯಕ ಪ್ರಾಧ್ಯಾಪಕರು, ಕೇಂದ್ರಿಯ                   :ಸದಸ್ಯರು

       ವಿಶ್ವವಿದ್ಯಾಲಯ, ಕಲಬುರ್ಗಿ.


  

Tuesday, October 26, 2021

     ದಿನಾಂಕ: ೩೦.೧೦.೨೦೨೧ ರಂದು ಕನ್ನಡ ವಿಶ್ವವಿದ್ಯಾಲಯದ ಬಂಜಾರ ಭಾಷಾಭಿವೃದ್ಧಿ ಅಧ್ಯಯನ ಕೇಂದ್ರದಲ್ಲಿ ಬಂಜಾರ ಭಾಷಾಭಿವೃದ್ಧಿ ಯೋಜನೆಯ ಸಲಹಾ ಸಮಿತಿ ಸಭೆಯು ಮಧ್ಯಾಹ್ನ ೨:೩೦ ಕ್ಕೆ ನಡೆಯುತ್ತದೆ.




Sunday, July 25, 2021

  ಸುದ್ದಿಗಳು: 

ಬಳ್ಳಾರಿ ಬೆಳಗಾಯಿತು ಪತ್ರಿಕೆಯಲ್ಲಿ ದಿನಾಂಕ: 23.07.2021 ರಂದು ಪ್ರಕಟವಾದ ಆಯ್ದ ಪ್ರಕಟಣೆ:



Monday, July 19, 2021

 ಸುದ್ದಿಗಳು: 

ಪ್ರಜಾವಾಣಿ ಪತ್ರಿಕೆಯಲ್ಲಿ ದಿನಾಂಕ 20.07.2021 ರಂದು ಪ್ರಕಟವಾದ ಆಯ್ದ ಪ್ರಕಟಣೆ:\





Thursday, July 15, 2021

  ಸುದ್ದಿಗಳು: 

ಪ್ರಜಾವಾಣಿ ಪತ್ರಿಕೆಯಲ್ಲಿ ದಿನಾಂಕ 15.07.2021 ರಂದು ಪ್ರಕಟವಾದ ಆಯ್ದ ಪ್ರಕಟಣೆ:




.

Monday, June 28, 2021

 

ಪ್ರಗತಿ ಪರಿಶೀಲನ ಸಭೆ:

ಬಂಜಾರ ಭಾಷೆ ಅಭಿವೃದ್ಧಿ ಅಧ್ಯಯನ ಕೇಂದ್ರದಲ್ಲಿ ದಿನಾಂಕ: ೨೫.೦೬.೨೦೨೧ ರಂದು ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಮಾನ್ಯ ವ್ಯವಸ್ಥಾಪಕ ನಿರ್ದೇಶಕ ಅರ್ಧಕ್ಷತೆಯಲ್ಲಿ ಕೇಂದ್ರದ ಯೋಜನಾ ಪ್ರಗತಿ ಪರಿಶೀಲನ ಸಭೆಯನ್ನು ನಡೆಸಲಾಯಿತು.








ಸಭೆಗೆ ಹಾಜರಾದವರು:
೧. ಶ್ರೀ ಶಿವಶಂಕರ್ ನಾಯ್ಕ : ವ್ಯವಸ್ಥಾಪಕರು, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ಬೆಂಗಳೂರು.
೨. ಶ್ರೀ ಭರತ್ ನಾಯ್ಕ : ನಿರ್ದೇಶಕರು, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ಕೊಪ್ಪಳ ವಲಯ.
೩. ಡಾ. ಮಾಧವ ಪೆರಾಜೆ: ನಿರ್ದೇಶಕರು, ಬಂಜಾರ ಭಾಷೆ ಅಭಿವೃದ್ಧಿ ಅಧ್ಯಯನ ಕೇಂದ್ರ, ಕನ್ನಡ       ವಿಶ್ವವಿದ್ಯಾಲಯ, ಹಂಪಿ.
೪. ಡಾ. ಎಸ್.ವೈ. ಸೋಮಶೇಖರ : ಉಪ-ಕುಲಸಚಿವರು(ಶೈಕ್ಷಣಿಕ), ಕನ್ನಡ ವಿಶ್ವವಿದ್ಯಾಲಯ, ಹಂಪಿ.
೫. ಡಾ. ಸೋಮನಾಥ ಕುಡಿತಿನಿ: ಅಧೀಕ್ಷಕರು, ಕಾನೂನು ತಜ್ಞರು, ಕನ್ನಡ ವಿಶ್ವವಿದ್ಯಾಲಯ, ಹಂಪಿ.
೬. ಡಾ. ಕೆ.ಆರ್. ಕೇಶವಮೂರ್ತಿ: ಸಂಶೋಧನಾಧಿಕಾರಿಗಳು, ಬಂಜಾರ ಭಾಷೆ ಅಭಿವೃದ್ಧಿ ಅಧ್ಯಯನ ಕೇಂದ್ರ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
೭. ಡಾ. ರಮೇಶ್. ಕೆ : ಸಂಶೋಧನಾಧಿಕಾರಿಗಳು, ಬಂಜಾರ ಭಾಷೆ ಅಭಿವೃದ್ಧಿ ಅಧ್ಯಯನ ಕೇಂದ್ರ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
೮. ಶ್ರೀ ನಾಗರಾಜ್. ಆರ್. ಎಲ್: ಕಂಪ್ಯೂಟರ್ ಆಪರೇಟರ್, ಬಂಜಾರ ಭಾಷೆ ಅಭಿವೃದ್ಧಿ          ಅಧ್ಯಯನ  ಕೇಂದ್ರ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
೯. ಶ್ರೀ ಪ್ರಕಾಶ್. ಎಲ್: ಪ್ರಥಮ ದರ್ಜೆ ಸಹಾಯಕ, ಬಂಜಾರ ಭಾಷೆ ಅಭಿವೃದ್ಧಿ ಅಧ್ಯಯನ ಕೇಂದ್ರ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
೧೦. ಶ್ರೀ ಲಾಲ್ಯ ನಾಯ್ಕ. ಕೆ: ಕಿರಿಯ ಸಹಾಯಕರು, ಬಂಜಾರ ಭಾಷೆ ಅಭಿವೃದ್ಧಿ ಅಧ್ಯಯನ ಕೇಂದ್ರ, ಕನ್ನಡ ವಿಶ್ವವಿದ್ಯಾಲಯ, ಹಂಪಿ.


Thursday, June 24, 2021

 

ಪ್ರಪಂಚದಲ್ಲಿ ಭಾಷೆಗಾಗಿಯೇ ಇರುವ ಏಕೈಕ ವಿಶ್ವವಿದ್ಯಾಲಯವೆಂಬ ಹೆಮ್ಮೆಯೊಂದಿಗೆ ಹುಟ್ಟಿಕೊಂಡ ಕನ್ನಡ ವಿಶ್ವವಿದ್ಯಾಲಯ ಕನ್ನಡದ ಬದುಕಿನ ವಿವೇಕದಂತೆ ಕೆಲಸಮಾಡಿದೆ. ಕರ್ನಾಟಕ ಸರಕಾರ ಕೊಡಮಾಡಿದ ಸುಮಾರು ಏಳುನೂರು ಎಕರೆಯಷ್ಟು ವಿಸ್ತಾರದಲ್ಲಿ ತ್ರಿಪದಿ, ಕೂಡಲಸಂಗಮ, ಕವಿರಾಜಮಾರ್ಗ, ಕ್ರಿಯಾಶಕ್ತಿ, ಭುವನವಿಜಯ, ತುಂಗಭದ್ರಾ, ಅನನ್ಯ, ಅಸ್ಮಿತೆ, ಅಕ್ಷರ ಗ್ರಂಥಾಲಯದOಥ ಭವ್ಯ ಕಟ್ಟಡಗಳಿವೆ. ಮರೆತು ಹೋಗಬಹುದಾಗಿದ್ದ ನಮ್ಮ ದೇಸಿ ಮಾರ್ಗದ ಹೆಸರುಗಳನ್ನು ಕಟ್ಟಡಗಳಿಗೆ ಇಟ್ಟು ಯುವಕರ ಭಾವಕೋಶದಲ್ಲಿ ಉಳಿಯುವಂತೆ ಮಾಡಿದೆ. ಕನ್ನಡ ವಿಶ್ವವಿದ್ಯಾಲಯಕ್ಕೆ ಭೌತಿಕವಾಗಿ ಭದ್ರ ಬುನಾದಿಯನ್ನು ಹಾಕಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರು ಕನ್ನಡ ವಿಶ್ವವಿದ್ಯಾಲಯ ಕೇವಲ ವಿದ್ಯೆಯನ್ನು ನೀಡುವುದಕ್ಕೆ ಸೀಮಿತವಲ್ಲ ವಿದ್ಯೆಯನ್ನು ಸೃಷ್ಟಿಸುವ ಕೇಂದ್ರವೆ0ದು ಕರೆಯುತ್ತ ವಿಶ್ವವಿದ್ಯಾಲಯದ ಆಶಯ ಸ್ವರೂಪವನ್ನು ನಿರ್ಧರಿಸಿ ಅದಕ್ಕೆ ಅನುಗುಣವಾಗಿಯೇ ಬುನಾದಿ ಹಾಕಿರುವರು. ಹಿಂದೆ ವಿದ್ಯಾನಗರವಾಗಿದ್ದ ಈ ಪ್ರದೇಶ ನಂತರ ಸಾಮಾಜ್ರ‍್ಯ ವಿಸ್ತಾರದಿಂದ ವಿಜಯನಗರವಾಗಿ ಈಗ ವಿದ್ಯಾರಣ್ಯವಾಗಿದೆ ಎಂಬ ಮಾತು ಚರಿತ್ರೆಯನ್ನು ನೆನಪಿಸುತ್ತದೆ. ಕನ್ನಡಿಗರ ನೂರಾರು ಕನಸುಗಳನ್ನು ಸಾಕಾರಗೊಳಿಸಲೆಂದು ಹುಟ್ಟಿದ ವಿಶ್ವವಿದ್ಯಾಲಯ ಕನ್ನಡದ ಕೆಲಸವನ್ನು ಕಾಲ ಬಯಸಿದಂತೆ ಮಾಡುತ್ತ ಬಂದಿದೆ. ಕನ್ನಡ ವಿಶ್ವವಿದ್ಯಾಲಯವನ್ನು ಭೌತಿಕವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರು ಕಟ್ಟಿದರೆ ಬೌದ್ಧಿಕವಾಗಿ ಪ್ರೊ.ಎಂ.ಎ0.ಕಲಬುರ್ಗಿಯವರು ಸಮರ್ಥವಾಗಿ ಕಟ್ಟಿದರು. ಅದನ್ನು ಮುಂದುವರಿಸಿಕೊOಡು ವಿಶ್ವವಿದ್ಯಾಲಯದ ಆಶಯಕ್ಕೆ ಧಕ್ಕೆಯಾಗದಂತೆ ಡಾ. ಎಚ್.ಜೆ.ಲಕ್ಕಪ್ಪಗೌಡ, ಡಾ. ಬಿ.ಎ.ವಿವೇಕ ರೈ, ಡಾ. ಎ.ಮುರಿಗೆಪ್ಪ, ಡಾ. ಹಿ.ಚಿ.ಬೋರಲಿಂಗಯ್ಯ ಇವರೆಲ್ಲರೂ ಕುಲಪತಿಗಳಾಗಿ ದುಡಿದಿರುವರು. ಎಲ್ಲರೂ ಕೂಡಿ ದುಡಿದ ಫಲವಾಗಿ ಕನ್ನಡ ವಿಶ್ವವಿದ್ಯಾಲಯ ಕನ್ನಡಿಗರ ಅಭಿಮಾನಕ್ಕೆ ಹೆಮ್ಮೆಗೆ ಪಾತ್ರವಾಗಿದೆ. ಕನ್ನಡ-ಕನ್ನಡದ ಬದುಕು-ಕರ್ನಾಟಕ ಸಂಸ್ಕೃತಿಯ ಕಲ್ಪನೆಯೊಂದಿಗೆ ಮೈದಳೆದ ಕನ್ನಡ ವಿಶ್ವವಿದ್ಯಾಲಯ ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಆಧರಿಸಿ ವಿದ್ಯೆಯ ಶೋಧನೆಗೆ ತೊಡಗುತ್ತಲೆ ಸಮಾಜಮುಖಿ ಚಿಂತನೆಗಳಿಗೆ ಬದ್ಧವಾಗಿ ಬದುಕಿನ ಸಂಕೀರ್ಣತೆಗಳಿಗೆ ಮುಖಾಮುಖಿಯಾಗಿ ಕಾರ್ಯ ಮಾಡುತ್ತಿದೆ. ಕನ್ನಡಪ್ರಜ್ಞೆ ವಿಶ್ವಪ್ರಜ್ಞೆಯಾಗಬೇಕೆಂಬುದು ಕೇವಲ ಆಶಯವಲ್ಲ; ಅದು ವಾಸ್ತವವಾಗುವುದರ ಕಡೆ ಕನ್ನಡ ವಿಶ್ವವಿದ್ಯಾಲಯದ ನಡೆಯಿದೆ. ವಿಶ್ವಜ್ಞಾನವನ್ನು ಕನ್ನಡದ ಮೂಲಕ ಪಡೆಯುವ ಕನ್ನಡದ ಜ್ಞಾನವನ್ನು ವಿಶ್ವಭಾಷೆಗಳ ಮೂಲಕ ವಿಶ್ವಕ್ಕೆ ನೀಡುವ ಕಾರ್ಯದಲ್ಲಿ ಮಡಿವಂತಿಕೆಗೆ ಒಳಗಾಗಿಲ್ಲ. ಜಾಗತೀಕರಣದ ಸವಾಲುಗಳಿಗೆ ದೇಸಿ ಜ್ಞಾನಪರಂಪರೆಯ ಮೂಲಕ ಉತ್ತರಿಸುವ ನೈತಿಕ ಹೊಣೆಗಾರಿಕೆಯನ್ನು ಬಹು ಎಚ್ಚರದಿಂದ ವಿಶ್ವವಿದ್ಯಾಲಯ ಉಳಿಸಿಕೊಂಡಿದೆ. ನಾಲ್ಕು ನಿಕಾಯಗಳಿಂದ ಪ್ರಾರಂಭವಾದ ವಿಶ್ವವಿದ್ಯಾಲಯ ಅಧ್ಯಯನಕ್ಕೆ ಪೂರಕವಾಗಿ ಇಪ್ಪತ್ತು ವಿಭಾಗಗಳನ್ನು ಪ್ರಾರಂಭಿಸಿದೆ. ಸಂಶೋಧನೆ-ಬೋಧನಾ ಕಾರ್ಯವನ್ನು ಸಾಂಪ್ರದಾಯಿಕ ವಿಶ್ವವಿದ್ಯಾಲಯದಂತೆ ಮಾಡದೆ ಭಿನ್ನವಾದ ರೀತಿಯಲ್ಲಿ ಪ್ರಾರಂಭಿಸಿ ಮುಂದುವರಿಸಿದೆ. ವಿಶ್ವವಿದ್ಯಾಲಯದ ಆತ್ಮದಂತಿರುವ ‘ಪ್ರಸಾರಾಂಗ’ ಸುಮಾರು ಒಂದು ಸಾವಿರದ ಎರಡುನೂರು ಪುಸ್ತಕಗಳನ್ನು ಪ್ರಕಟಿಸುವುದರ ಮೂಲಕ ಜ್ಞಾನ ಪ್ರಸಾರವನ್ನು ಅರ್ಥಪೂರ್ಣವಾಗಿ ಮಾಡುತ್ತಿದೆ. ವಿಶ್ವವಿದ್ಯಾಲಯದ ಒಳಗಡೆಯ ಮತ್ತು ವಿಶ್ವವಿದ್ಯಾಲಯದ ಹೊರಗಿರುವ ನಾಡಿನ ಹೆಸರಾಂತ ವಿದ್ವಾಂಸರು, ಚಿಂತಕರ ಮೂಲಕ ಮೌಲಿಕವಾದ ಗ್ರಂಥಗಳನ್ನು ಪ್ರಕಟಿಸುತ್ತ ತನ್ನ ಬಹುತ್ವದ ನೆಲೆಯನ್ನು ಗಟ್ಟಿಗೊಳಿಸಿಕೊಂಡಿದೆ.






ಬಂಜಾರ ಭಾಷಾಭಿವೃದ್ಧಿ ಅಧ್ಯಯನ ಕೇಂದ್ರಕ್ಕೆ ಹೀಗೆ ಬನ್ನಿ:

    ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಸಹಯೋಗದೊಂದಿಗೆ ಬಂಜಾರ ಭಾಷಾಭಿವೃದ್ಧಿ ಅಧ್ಯಯನ ಕೇಂದ್ರವನ್ನು ದಿನಾಂಕ:24.12.2016 ರಂದು ಸ್ಥಾಪನೆ ಮಾಡಲಾಯಿತು. ಕೇಂದ್ರದ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬOಧಿಸಿದOತೆ ಈ ಕೆಳಗಿನ ತಜ್ಞ ಸಲಹಾ ಸಮಿತಿಯನ್ನು ರಚಿಸಲಾಯಿತು. 


1. ಡಾ. ಮಲ್ಲಿಕಾ ಎಸ್ ಘಂಟಿ, ಮಾನ್ಯ ಕುಲಪತಿಗಳು, ಕವಿಹಂ                                                                  :ಅಧ್ಯಕ್ಷರು

2. ಶ್ರೀಯುತ ಹೀರಾನಾಯ್ಕ, ಖಾಸಗಿ ಆಪ್ತಕಾರ್ಯದರ್ಶಿ,ಮಾನ್ಯ ಮುಖ್ಯಮಂತ್ರಿಗಳು                          :ಸದಸ್ಯರು
     ಕರ್ನಾಟಕ ಸರ್ಕಾರ, ಬೆಂಗಳೂರು 

3. ವ್ಯವಸ್ಥಾಪಕ ನಿರ್ದೇಶಕರು,ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು       :ಸದಸ್ಯರು

4. ಡಾ. ಹಂಪಾ ನಾಗರಾಜನಯ್ಯ, ನಿವೃತ ಪ್ರಾಧ್ಯಾಪಕರು,ಬೆಂಗಳೂರು                                               :ಸದಸ್ಯರು

5. ಡಿ.ಬಿ.ನಾಯಕ್, ಕುಲಸಚಿವರು, ಕರ್ನಾಟಕ ಜನಪದ ವಿವಿ, ಗೊಟಗೋಡಿ                                       :ಸದಸ್ಯರು

6. ಹರಿಲಾಲ್ ಪವಾರ್, ನಿರ್ದೇಶಕರು, ಪ್ರಸಾರಾಂಗ, ಕರ್ನಾಟಕ ವಿವಿ, ಧಾರವಾಡ                             :ಸದಸ್ಯರು

7. ಡಾ. ಬಸವರಜ ಕೋಡಗುಂಟಿ, ಸಹ ಪ್ರಾಧ್ಯಾಪಕರು, ಕೇಂದ್ರೀಯ ವಿವಿ, ಕಲಬುರ್ಗಿ                       :ಸದಸ್ಯರು

8. ಕನ್ನಡ ಭಾಷಾಧ್ಯಯನ ವಿಭಾಗದ ಎಲ್ಲಾ ಪ್ರಾಧ್ಯಾಪಕರು, ಕವಿಹಂ                                              :ಸದಸ್ಯರು

9. ಮಾನ್ಯ ಕುಲಸಚಿವರು, ಕವಿಹಂ                                                                                
 :ಪದನಿಮಿತ್ತ ಸದಸ್ಯರು

10. ಡೀನ್, ಭಾಷಾನಿಕಾಯ, ಕವಿಹಂ                                                                              
:ಪದನಿಮಿತ್ತ ಸದಸ್ಯರು

11. ಮುಖ್ಯಸ್ಥರು, ಭಾಷಾಧ್ಯಯನ ವಿಭಾಗ, ಕವಿಹಂ                                                        
:ಸದಸ್ಯ ಸಂಚಾಲಕರು.


ಮುOದುವರಿದು ದಿನಾಂಕ:25.10.2019 ರಂದು ಈ ಕೆಳಕಂಡOತೆ ಸಲಹಾ ಸಮಿತಿಯನ್ನು ಪುನಾರಚಿಸಲಾಯಿತು.

1. ಡಾ. ಸ.ಚಿ.ರಮೇಶ, ಮಾನ್ಯ ಕುಲಪತಿಗಳು, ಕವಿಹಂ                                                                       :ಅಧ್ಯಕ್ಷರು

2. ಅಧ್ಯಕ್ಷರು, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಬೆಂಗಳೂರು                                                 :ಸದಸ್ಯರು

3. ವ್ಯವಸ್ಥಾಪಕ ನಿರ್ದೇಶಕರು,ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು    :ಸದಸ್ಯರು

4. ಪ್ರೊ. ಪಿ.ಕೆ. ಖಂಡೋಬ, ನಿವೃತ ಪ್ರಾಧ್ಯಾಪಕರು, ಬೆಂಗಳೂರು                                                      :ಸದಸ್ಯರು

5. ಪ್ರೊ. ಸಣ್ಣರಾಮ ನಾಯ್ಕ, ನಿವೃತ ಪ್ರಾಧ್ಯಾಪಕರು, ಶಿವಮೊಗ್ಗ                                                     :ಸದಸ್ಯರು

6. ಡಾ. ಪಂಡಿತ ರಾಠೋಡ್, ಸಹ ಪ್ರಾಧ್ಯಾಪಕರು, ಕರ್ನಾಟಕ ವಿವಿ, ಧಾರವಾಡ                             :ಸದಸ್ಯರು

7. ಪ್ರೊ.ಚೆ. ರಾಮಸ್ವಾಮಿ, ನಿವೃತ್ತ ಪ್ರಾಧ್ಯಾಪಕರು, ಕಲಬುರ್ಗಿ                                                         :ಸದಸ್ಯರು

8. ಡಾ.ಡಿ.ಪಾಂಡುರOಗಬಾಬು, ಮುಖ್ಯಸ್ಥರು, ಕನ್ನಡ ಭಾಷಾಧ್ಯಯನ ವಿಭಾಗ,ಕವಿಹಂ                :ಸದಸ್ಯರು

9. ಡೀನ್, ಭಾಷಾನಿಕಾಯ, ಕವಿಹಂ :ಪದನಿಮಿತ್ತ                                                                            : ಸದಸ್ಯರು

10. ಮಾನ್ಯ ಕುಲಸಚಿವರು, ಕವಿಹಂ :ಪದನಿಮಿತ್ತ                                                                            :ಸದಸ್ಯರು

11. ಹಣಕಾಸು ಅಧಿಕಾರಿ, ಕವಿಹಂ :ಪದನಿಮಿತ್ತ                                                                                   :ಸದಸ್ಯರು

12. ಡಾ. ಎಸ್ ವೈ ಸೋಮಶೇಖರ್, ಉಪ ಕುಲಸಚಿವರು(ಶೈ), ಕವಿಹಂ                          
 :ಸದಸ್ಯ ಸಂಚಾಲಕರು.

ಕ್ರೀಯಾಯೋಜನೆಗಳು:

1. ನಿಘಂಟು ರಚನೆ.

2. ಬಂಜಾರ ವಿಶ್ವಕೋಶ.

3. ಬಂಜಾರ ಪಾರಿಭಾಷಿಕ ಪದಕೋಶ.

4. ಬಂಜಾರ ಭಾಷೆ ಆಧುನಿಕರಣ.

5. ಬಂಜಾರ ಸಂಗಾತಿ.

6. ಪ್ರಕಟಣೆ.

7. ಪಠ್ಯ ಪುಸ್ತಕ ಮತ್ತು ಕಲಿಕಾ ಸಾಮಗ್ರಿ ರಚನೆ.

8. ಕ್ಷೇತ್ರ ಕಾರ್ಯ ಮತ್ತು ದತ್ತಾಂಶ ಸಂಗ್ರಹ ಯೋಜನೆ.

9. ಕಾರ್ಯಗಾರ ಮತ್ತು ತರಬೇತಿ ಶಿಬಿರ.

10. ಅನುವಾದ ಯೋಜನೆ.

11. ಬಂಜಾರ ವಸ್ತುಸಂಗ್ರಹಾಲಯ ಸ್ಥಾಪನೆ.

12. ವಾರ್ತಾ ಪತ್ರ ಪ್ರಕಟಣೆ.

13. ಬಂಜಾರ ಸಮ್ಮೇಳನ.

14. ಅನಿವಾಸಿ ಬಂಜಾರರಿಗೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ.

15. ಬಂಜಾರ ಭಾಷೆಯನ್ನು ಜನಪ್ರಿಯಗೊಳಿಸುವ ಕಾರ್ಯಕ್ರಮಗಳು.

    ಭಾರತದಲ್ಲಿ ನಿರ್ಲಕ್ಷಕ್ಕೆ ಒಳಗಾದ ಹಲವು ಸಮುದಾಯಗಳಲ್ಲಿ ಬಂಜಾರವೂ ಒಂದು. ಬಂಜಾರ ಪದ ಜಾತಿವಾಚಕ ಶಬ್ದವಲ್ಲ, ಅದು ವೃತ್ತಿವಾಚಕವಾಗಿದೆ. ದಕ್ಷಿಣದ ಭಾರತದಲ್ಲಿ ಲಮಾಣಿ, ಲಂಬಾಣಿ, ಬಂಜಾರ, ನಾಯ್ಕ, ಗೋರ್ಮಾಟಿ ಅಥವಾ ಗೋರ್‌ಬೋಲಿ ಮೊದಲಾದ ಹೆಸರಿನಿಂದ ಕರೆಯಲಾಗುವ ಭಾಷೆಯನ್ನು ಇವರು ಮಾತಾಡುತ್ತಾರೆ. ಇದರ ಭಾಷೆಯ ಮೇಲೆ ಮಾರ್ವಾಡಿ, ಮಾಲವಿ, ಪ್ರಾಕೃತ, ಮರಾಠಿ, ಸಿಂಧಿ, ಗುಜರಾತಿ, ಪಾರ್ಸಿ ಮುಂತಾದ ಭಾಷೆಗಳು ಪ್ರಭಾವ ಬೀರಿವೆ. ಬಂಜಾರ ಸಮುದಾಯದವರು ಮೂಲತಃ ರಾಜಾಸ್ಥಾನದ ಢೋಲಾಪುರ ಮತ್ತು ಗುಜರಾತ್ ಮೂಲದವರು. ಇವರು ರಾಜಾಸ್ಥಾನ, ಮಹಾರಾಷ್ಟç, ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳನಾಡುಗಳಲ್ಲಿ ನಿವಾಸಿಸುವ ಒಂದು ಜನಸಮುದಾಯದವರು. ಕರ್ನಾಟಕದಲ್ಲಿ ಕನ್ನಡ ಭಾಷೆಯ ಪ್ರಭಾವವುಳ್ಳ ಇವರ ಮಾತೃಭಾಷೆಯ (ಗೋರ್‌ಬೋಲಿ) ಮೇಲೆ ಕನ್ನಡ ಭಾಷೆಯ ಪ್ರಭಾವವಾಗಿದೆ. ಆಯಾ ರಾಜ್ಯಗಳಲ್ಲಿನ ರಾಜ್ಯ ಭಾಷೆಗಳನ್ನು ಎರಡನೇ ಭಾಷೆಯಾಗಿ ಮಾಡಿಕೊಂಡಿದ್ದಾರೆ. ಇವರು ತನ್ನದೇ ಆದ ವೇಷಭೂಷಣದಿಂದ ಗುರುತಿಸಿಕೊಳ್ಳುವ ಈ ಸಮುದಾಯ ಒಂದು ಬುಡಕಟ್ಟು ಜನಾಂಗವಾಗಿದೆ. ಅಲೆಮಾರಿ ಗುಂಪಿಗೆ ಸೇರಿದ ಈ ಸಮುದಾಯದ ಐತಿಹಾಸಿಕ ಅಧ್ಯಯನಗಳು ಕಡಿಮೆ. ಆದರೂ ಹಲವು ವಿಭಿನ್ನ ನೆಲೆಗಳಿಂದ ಇಂದಿಗೂ ಭಾರತೀಯ ಸಮುದಾಯಗಳಲ್ಲಿ ಬಂಜಾರರು ವಿಶಿಷ್ಟವಾಗಿ ಕಾಣಿಸುವುದಲ್ಲದೆ ಹಲವು ಬುಡಕಟ್ಟು ಗುಂಪುಗಳಲ್ಲಿ ಅಜ್ಞಾತವಾಗಿ ಉಳಿದಿದ್ದಾರೆ. ಹೀಗೆ ವಿಸ್ಮೃತಿಗೆ ಒಳಗಾದ ಸಮುದಾಯದ ಇತಿಹಾಸದ ಅಸ್ಮಿತೆಗಳನ್ನು ಗುರುತಿಸಬೇಕಾಗಿದೆ.
    ಇವರ ಪ್ರಾಚೀನತೆಯ ಇತಿಹಾಸ ಸುಮಾರು ಎರಡು ಸಾವಿರ ವರ್ಷಗಳಷ್ಟು ಹಳೆಯದಾಗಿದೆ. 5ನೆಯ ಶತಮಾನದಿಂದ 16ನೆಯ ಶತಮಾನದ ಕಾಲಾವಧಿಯನ್ನು ``ರಾಜಪೂತ''ಯುಗವೆಂದು ಕರೆಯಲಾಗಿದೆ. ಉತ್ತರ ಭಾರತದಲ್ಲಿ ಸಾವಿರ ವರ್ಷಗಳ ಕಾಲ ಏಕಚಕ್ರಾಧಿಪತ್ಯದಿಂದ ರಾಜ್ಯಭಾರಮಾಡಿದ ಅರಸು ಮನೆತನಗಳಾದ ಗೂರ್ಜರರು, ಪಾರಮಾರರು, ಸೋಳಂಕಿಗಳು, ಬುಂದೇಲರು, ಕಳಚೂರರು ಮುಂತಾದ ಅರಸು ಮನೆತನಗಳಿವೆ. ರಾಷ್ಟ್ರಕೂಟ, ರಾಠೋಡ, ಚವ್ಹಾಣ, ಪವಾರರು ಮೂಲತಃ ಕ್ಷತ್ರಿಯರು ಎಂದು ಹೇಳಬಹುದಾಗಿದೆ.
        ಇಲ್ಲಿ ಮುಖ್ಯವಾಗಿ ಗಮನಿಸುವ ಅಂಶವೆOದರೆ ರಜಪೂತ ಕ್ಷತ್ರಿಯ ಬಂಜಾರರು ಭಾರತ, ಭಾರತೇತರ ದೇಶಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಅದರಲ್ಲಿ ಸೋಮವಂಶೀಯ ಕ್ಷತ್ರಿಯರಲ್ಲಿ ಚವ್ಹಾಣ, ರಾಠೋಡ, ಪವಾರರು ಇದ್ದಾರೆ. ಮರಾಠರಲ್ಲಿಯೂ ರಾಠೋಡ-ಚವ್ಹಾಣ, ಪವಾರ-ಜಾಧವರಿದ್ದಾರೆ. ಮಾರವಾಡಿ, ಗುಜ್ಜರಗಳಲ್ಲಿ ಚವ್ಹಾಣ, ರಾಠೋಡ, ಪಮ್ಮಾರ, ಪವಾರ ಹೆಸರಿನ ಕುಟುಂಬಗಳಿವೆ. ಹಾಗೆಯೇ ಬಂಜಾರ ಸಮುದಾಯದಲ್ಲಿಯೂ ಈ ಮೇಲೆ ಉಲ್ಲೇಖಿಸಿದ ಹೆಸರುಗಳು ತಲೆ ತಲಾಂತರಗಳಿAದ ಚಲಾವಣೆಯಲ್ಲಿವೆ. ಇದನ್ನು ಗಮನಿಸಿದಾಗ ಇವರ ಮೂಲ ಒಂದೇ ಆಗಿರಬೇಕೆಂದು ತೋರುತ್ತದೆ. ಪೂರ್ವದಲ್ಲಿ ಇವರೆಲ್ಲರ ವಾಸದನೆಲೆಗಳು ಉತ್ತರ ಭಾರತವೇ ಆಗಿದ್ದು, ಇವರ ರಕ್ತವು ಒಂದೇ ಕುಲದ್ದಾಗಿದೆ. ಹೀಗಿದ್ದು, ಇವರ ಆಚಾರ, ವಿಚಾರಗಳು ರೀತಿ-ರಿವಾಜುಗಳು, ಕುಲ-ದೈವಗಳು ಏಕೆ ಭಿನ್ನವಾದವು ಎಂಬುದೇ ಯಕ್ಷ ಪ್ರಶ್ನೆ.
     ಇವರಿಗೆ ಶಿಕ್ಷಣದ ಅಭಾವದ ಕಾರಣವಾಗಿ ಬಂಜಾರರ ಇತಿಹಾಸದ ಕುರಿತು ಗ್ರಂಥಗಳು ರಚನೆ ಆಗಲಿಲ್ಲ. ಕೇವಲ ಕ್ಷೇತ್ರಕಾರ್ಯ ಮತ್ತು ಅಂತೆ ಕಂತೆಗಳ ಐತಿಹ್ಯಗಳನ್ನು ಆಧರಿಸಿ’, ಪುಸ್ತಕ, ಬಿಡಿ ಬಿಡಿ ಲೇಖನಗಳು ಮಾತ್ರ ಪ್ರಕಟವಾಗಿವೆ. ಬಂಜಾರರ ಸಮಗ್ರ ಇತಿಹಾಸವನ್ನು ತಿಳಿಸುವ ಕೃತಿಗಳು ರಚನೆ ಆಗಿಲ್ಲ. ಬಂಜಾರರ ಪ್ರಾಚೀನತೆಯ ಕುರುಹುಗಳ ಬಗ್ಗೆ, ಅವರು ಮಾಡಿದ ಸಾಧನೆ ಪ್ರಹಾಸಗಳ ಬಗೆಗೆ ಸಮಗ್ರ ಪರಿವೀಕ್ಷಣೆಯ ಶೋಧ ಇನ್ನೂ ಆಗಿಲ್ಲ. ಇತ್ತೀಚ್ಚೆಗೆ ಬಂಜಾರ ಸಂಸ್ಕೃತಿಯ ಕುರಿತು ಸಂಪೂರ್ಣ ಅಧ್ಯಯನ ನಡೆದಿದ್ದರೂ ವಿಸ್ಮೃತಿ ಹೊಂದಿದ ಸಾಂಸ್ಕೃತಿಕ, ಐತಿಹಾಸಿಕ ಅಸ್ಮಿತೆಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿಲ್ಲ. ಹೀಗಾಗಿ ಬಂಜಾರರ ಹಾಡು ಕಥೆ, ಒಗಟು, ಕಥನಗೀತೆ, ಮುಂತಾದವುಗಳ ಕುರಿತು ಸಂಗಹ್ರಕಾರ್ಯ ನಡೆಯಬೇಕಾಗಿದೆ. ಭಾರತದ ಬೇರೆ ಬೇರೆ ರಾಜ್ಯಗಳ ಬೇರೆ ಬೇರೆ ತಾಂಡಾಗಳಲ್ಲಿ ಬಂಜಾರರ ಇತಿಹಾಸಕ್ಕೆ ಸಂಬOಧಿಸಿ ಲಾವಣಿ, ಹಾಡು, ಗೀತೆ, ಆಚರಣೆಗಳಂಥ ಅನೇಕ ಸಂಗತಿಗಳನ್ನು ಸಂಸ್ಕೃತಿಯ ವಿಷಯಕ್ಕೆ ನೆರವಾಗುವುದರಿಂದ ಅವುಗಳನ್ನು ಪ್ರತ್ಯಕ್ಷ ನೋಡುವುದು ಅವಶ್ಯ. ಇಂದು ಬಂಜಾರರ ನೃತ್ಯ, ಹಾಡು, ವೇಷಭೂಷಣಗಳು ಜನಪದ ಆಚರಣೆಗಳು ಮಾಯವಾಗುವ ಸೂಚನೆಗಳು ಕಂಡುಬರುತ್ತಿವೆ. 
        ಬಹಳ ಮುಖ್ಯವಾಗಿ ನಮಗೆ ಕಾಡುವ ಪ್ರಶ್ನೆ ಎಂದರೆ, ಬಂಜಾರರ ಆಚಾರ-ವಿಚಾರ-ರೀತಿ-ರಿವಾಜುಗಳು, ವೇಷ-ಭೂಷಣಗಳು ಇತರೇ ಸಮುದಾಯಗಳಿಗಿಂತ ಭಿನ್ನ ಏಕೆ? ಇದಕ್ಕೆ ಕಾರಣವೇನು? ನಾಗರಿಕ ಸಂಸ್ಕೃತೀಕರಣಗೊಳ್ಳದೆ ಅರೆನಾಗರಿಕ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಆ ನಾಗರಿಕ ಸಂಸ್ಕೃತಿಯ ನೆರಳನ್ನು ತಾಗಿಸಿಕೊಳ್ಳದೆ ಅವರಿಂದ ಐದಾರು ಕಿ.ಮೀ. ದೂರದ ಹಳ್ಳ-ಕೊಳ್ಳ, ಬೆಟ್ಟ-ಗುಡ್ಡಗಳ ನಿಸರ್ಗ ಸಂಸ್ಕೃತಿಯೆಡೆಗೆ ನೆಲೆ ಮಾಡಿಕೊಂಡಿದ್ದರ ಉದ್ದೇಶ ಏನಿರಬಹುದು? ಈ ಹಿನ್ನೆಲೆಯಲ್ಲಿ ಬಂಜಾರ ಭಾಷಾಭಿವೃದ್ಧಿ ಕೇಂದ್ರದಲ್ಲಿ ಕ್ರಿಯಾ ಯೋಜನೆಗಳನ್ನು ರೂಪಿಸಲಾಗಿದೆ. ಅದು ಹೀಗಿದೆ:

ಬಂಜಾರ ಭಾಷಾ ನಿಘಂಟು:

        ಕನ್ನಡ ವಿಶ್ವವಿದ್ಯಾಲಯ, ಹಂಪಿ ಇವರಿಗೆ ಈಗಾಗಲೇ ಬಿಡುಗಡೆ ಮಾಡಲಾದ ಮೊದಲನೇ ಕಂತಿನ ಅನುದಾನದಲ್ಲಿ ಬಂಜಾರ ಭಾಷಾ ಪದಗಳ ಸಂಗ್ರಹಣೆ ಮಾಡಿ ನಿಘಂಟನ್ನು ಸಿದ್ದಪಡಿಸಲಾಗಿದೆ. ಅದನ್ನು ಬಂಜಾರ ಭಾಷಾ ಪರಿಣಿತರ ಪರಿಶೀಲನೆಗೆ ಒಳಪಡಿಸಿ ಮುದ್ರಣಗೊಳಿಸಬಹುದಾಗಿದೆ. ಕಾಲಕಾಲಕ್ಕೆ ಸಂಗ್ರಹಣೆ ಆಗುವ ಶಬ್ಧಗಳನ್ನು ಸೇರಿಸಿ ಬಂಜಾರ ಭಾಷಾ ನಿಘಂಟನ್ನು ಪರಿಷ್ಕರಿಸಿ ಪೂರ್ಣಗೊಳಿಸುವುದು. ಬಂಜಾರ ಭಾಷಾ ನಿಘಂಟು ಶಿಕ್ಷಣ, ವ್ಯವಸಾಯ, ಕೈಗಾರಿಕೆ, ವಿಜ್ಞಾನ, ಕಾನೂನು, ವ್ಯವಹಾರಿಕ ಇತ್ಯಾದಿ ಕ್ಷೇತ್ರಕ್ಕೆ ಸಂಬAಧಿಸಿದ ಪದಗಳನ್ನು ಒಳಗೊಂಡಿರಬೇಕು.

ಬOಜಾರ ಭಾಷಾ ಅಭಿವೃದ್ಧಿ ಕೇಂದ್ರದಲ್ಲಿ ಗ್ರಂಥಾಲಯ ಸ್ಥಾಪನೆ:

        ಬಂಜಾರ ಭಾಷಾ ಅಭಿವೃದ್ಧಿ ಕುರಿತು ಅಧ್ಯಯನ/ಸಂಶೋಧನೆ ಮತ್ತು ಸಾಮಾನ್ಯ ಜ್ಞಾನದ ಮಾಹಿತಿ ಪಡೆಯಲು ಎಲ್ಲಾ ವಿಷಯಗಳ ವಿಶೇಷವಾಗಿ ಬಂಜಾರ ಭಾಷೆಯ ಗ್ರಂಥಗಳನ್ನು ಮತ್ತು ನಿಯತಕಾಲಿಕ ಹಾಗೂ ಪತ್ರಿಕೆಗಳ ಸರಬರಾಜು ವ್ಯವಸ್ಥೆಯೂ ಸೇರಿದಂತೆ ಬಂಜಾರ ಸಾಧಕರ ಜೀವನ ಚರಿತ್ರೆ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಜೀವನ ಚರಿತ್ರೆ ರಚಿಸುವುದು. ಇದೇ ರೀತಿ ಸ್ವಾತಂತ್ರ‍್ಯ ಪೂರ್ವ ಮತ್ತು ನಂತರದ ರಾಜಕೀಯ ಕ್ಷೇತ್ರಗಳಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ ಬಂಜಾರ ಸಮುದಾಯದ ನಾಯಕರ ಜೀವನ ಚರಿತ್ರೆ ರಚಿಸಿ ಮುದ್ರಿಸುವುದು. ಈ ದಿಶೆಯಲ್ಲಿ ಸಂಶೋಧನಾ ವಿದ್ಯಾರ್ಥಿಗಳನ್ನು ತೊಡಗಿಸಲು ಸಂಶೋಧನಾ ವಿಭಾಗವನ್ನು ತೆರೆಯುವುದು.

ಸಮುದಾಯದ ಬರಹಗಾರರು/ಲೇಖಕರ ಗ್ರಂಥಗಳ ಮುದ್ರಣ: 

    ಬಂಜಾರ ಸಮುದಾಯದ ಬರಹಗಾರರು ಬಂಜಾರ ಸಮುದಾಯ ಮತ್ತು ಸಂಸ್ಕೃತಿ ಕುರಿತು ರಚಿಸಿರುವ ಪುಸ್ತಕಗಳನ್ನು ಪರಿಶೀಲಿಸಿ ಅರ್ಹ ಗ್ರಂಥಗಳನ್ನು ಮುದ್ರಿಸಿ ಗ್ರಂಥಾಲಯಗಳಿಗೆ ಸರಬರಾಜು ಮಾಡುವುದು.

ಬಂಜಾರ ಭಾಷಾ ವ್ಯಾಕರಣ ರಚನೆ:

    ಬಂಜಾರ ಭಾಷಾ ವ್ಯಾಕರಣವನ್ನು ಇತರೆ ಪ್ರಾದೇಶಿಕ ಭಾಷ ವ್ಯಾಕರಣಗಳನ್ನು ಅಧಾರಿಸಿ ಸಿದ್ಧಪಡಿಸುವುದು ಅಗತ್ಯವಿದೆ. ಈ ದಿಶೆಯಲ್ಲಿ ಯಾವುದೇ ಭಾಷಾ ವ್ಯಾಕರಣ ಅರಿತ ಮತ್ತು ಬಂಜಾರ ಭಾಷೆ ಬಲ್ಲ ಪರಿಣಿತರ ಸಮಿತಿಯನ್ನು ರಚಿಸಿ ಕಾರ್ಯಾಗಾರವನ್ನು ನಡೆಸಿ ಸಿದ್ದಪಡಿಸುವುದಾಗಿದೆ. ಸಿದ್ದಪಡಿಸಿದ ಬಂಜಾರ ಭಾಷಾ ವ್ಯಾಕರಣವನ್ನು ಪರಿಶೀಲನೆಗೆ ಒಳಪಡಿಸಿ ಪ್ರಾರಂಭದಲ್ಲಿ ಪುಸ್ತಿಕೆ ರೂಪದಲ್ಲಿ ಹೊರತರವುದಾಗಿದೆ.

ಬಂಜಾರ ಭಾಷೆಯಲ್ಲಿ ಪಠ್ಯ ರಚನೆ:
 
    ಬಂಜಾರ ಭಾಷಾ ವ್ಯಾಕರಣ ಸಿದ್ದಪಡಿಸಿದಂತೆ ಬಂಜಾರ ಭಾಷೆಯಲ್ಲಿ ಪಠ್ಯ ರಚಿಸುವ ಪ್ರಯೋಗವನ್ನು ನಡೆಸಬೇಕಾಗಿದೆ. ಈ ದಿಶೆಯಲ್ಲಿ ಬಂಜಾರ ಭಾಷೆಯಲ್ಲಿ ಪರಿಣಿತರಾದವರ ಸಮಿತಿಯನ್ನು ರಚಿಸಬೇಕು. ಸಮಿತಿಯ ಸದಸ್ಯರ ಕಾರ್ಯಾಗಾರವನ್ನು ನಡೆಸಿ ಬಂಜಾರ ಭಾಷಾ ಪಠ್ಯ ಪುಸ್ತಿಕೆ(ಪ್ರಾಥಮಿಕೆ)ವನ್ನು ಹೊರತರುವುದಾಗಿದೆ.

ಸಭೆ, ತರಬೇತಿ  :

    ಬಂಜಾರ ಭಾಷೆ ಮತ್ತು ಸಂಸ್ಕೃತಿಗೆ ಸಂಬOಧಿಸಿದOತೆ ನಡೆಸುವ ಸಂಶೋದನೆ, ಗ್ರಂಥ ರಚನೆ, ವ್ಯಾಕರಣ ರಚನೆ, ಪಠ್ಯ ರಚನೆ, ಪ್ರಕಟಣೆ ಇತ್ಯಾದಿ ಕಾರ್ಯಗಳನ್ನು ಕೈಗೊಳ್ಳುವ ದಿಶೆಯಲ್ಲಿ ಸಭೆ, ತರಬೇತಿ ಮತ್ತು ಕಾರ್ಯಾಗಾರವನ್ನು ನಡೆಸಬೇಕಾಗುತ್ತದೆ. 


ಮುಖ್ಯ ಉದ್ದೇಶಗಳು

• ನಿರ್ದಿಷ್ಟವಾಗಿ ಮತ್ತು ಸಾಮಾನ್ಯವಾಗಿ ತಾಂಡಾ ನಿವಾಸಿಗಳ ಒಟ್ಟಾರೆ ಅಭಿವೃದ್ಧಿಗೆ ಭೌತಿಕ, ಸಾಮಾಜಿಕ-ಆರ್ಥಿಕ, ಸಾಂಸ್ಕೃತಿಕಗಳನ್ನು ಶೈಕ್ಷಣಿಕವಾಗಿ ಅಧ್ಯಯನ ಮಾಡುವುದಾಗಿದೆ. 
• ಬಂಜಾರ ಉಪಭಾಷೆಯನ್ನು ರಕ್ಷಿಸಲು ಮತ್ತು ಭಾಷೆಯ ಲಿಪಿಯನ್ನು ಉತ್ತೇಜಿಸಲು ಮತ್ತು ಅಭಿವೃದ್ಧಿಪಡಿಸಲು ಮತ್ತು ಭಾಷೆ, ಪದ್ಧತಿಗಳು, ಜೀವನ ಶೈಲಿ, ಸಂಪ್ರದಾಯಗಳು, ಕಲೆ ಮತ್ತು ಜಾನಪದ, ಜನಾಂಗೀಯತೆ ಕ್ಷೇತ್ರಗಳಲ್ಲಿ ಬಂಜಾರರ ಶ್ರೀಮಂತ ಸಂಸ್ಕೃತಿಯನ್ನು ರಕ್ಷಿಸಲು, ಸಂರಕ್ಷಿಸಲು ಮತ್ತು ಉತ್ತೇಜಿಸಲು ಭಾಷೆಯ ನಿಘಂಟನ್ನು ಹೊರತರುವುದು. 
• ಲಂಬಾಣಿ ಯುವಕ-ಯುವತಿಯಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಅಗತ್ಯ ಮೂಲಸೌಕರ್ಯಗಳ ಮಾಹಿತಿ ಒದಗಿಸುವುದು. 
• ಬಂಜಾರ ನಿವಾಸಿಗಳಿಗೆ ಸ್ವ-ಉದ್ಯೋಗ ಮತ್ತು ಗುಂಪು ಉದ್ಯೋಗ, ಆದಾಯ ಉತ್ಪಾದನೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ಹೊಸ ಕೌಶಲ್ಯಗಳನ್ನು ಪಡೆಯಲು ತರಬೇತಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಮತ್ತು ವಿವಿಧ ಕ್ಷೇತ್ರಗಳಲ್ಲಿ ಕೌಶಲ್ಯಗಳನ್ನು ಹೆಚ್ಚಿಸಲು, ವರ್ಧಿಸಲು ಮತ್ತು ಅಭಿವೃದ್ಧಿಪಡಿಸಲು, ವಿಶೇಷವಾಗಿ ಸಾಂಪ್ರದಾಯಿಕ ಸಮುದಾಯದ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳನ್ನು ನವೀಕರಿಸಲು, ಉತ್ತೇಜಿಸಲು ಮತ್ತು ಬಲಪಡಿಸಲು ಯುವ ಲಂಬಾಣಿ ಪೀಳಿಗೆ ಮತ್ತು ಫ್ಯಾಷನ್ ಜಗತ್ತನ್ನು ಆಕರ್ಷಿಸಲು ಬಂಜಾರ ವೇಷಭೂಷಣಗಳ ಅನನ್ಯ ಕಸೂತಿ ಕೌಶಲ್ಯ (ಹೊಲಿಗೆ ಮತ್ತು ಕಸೂತಿ) ಕಾರ್ಯಕ್ರಮಗಳನ್ನು ಆರಂಭಿಸುವುದು..

ಕೇOದ್ರದ ಸಿಬ್ಬಂದಿಯವರ ವಿವರ:

1. ಡಾ. ಮಾಧವ ಪೆರಾಜೆ                                                 ನಿರ್ದೇಶಕರು

2. ಡಾ. ಕೆ.ಆರ್.ಕೇಶವಮೂರ್ತಿ                                      ಸಂಶೋಧನಾಧಿಕಾರಿಗಳು 

3. ಡಾ. ರಮೇಶ. ಕೆ                                                            ಸಂಶೋಧನಾಧಿಕಾರಿಗಳು 

4. ಶ್ರೀ. ನಾಗರಾಜ್ ಆರ್.ಎಲ್                                          ಕಂಪ್ಯೂಟರ್ ಆಪರೇಟರ್ 

5. ಶ್ರೀ. ಪ್ರಕಾಶ್ ಎಲ್                                                        ಪ್ರಥಮ ದರ್ಜೆ ಸಹಾಯಕರು 

6. ಶ್ರೀ. ಲಾಲ್ಯ ನಾಯ್ಕ                                                       ಕಿರಿಯ ಸಹಾಯಕರು



                                                                                                                        Designed by: Nagaraj R L
                                                                                                                    Guided by: Dr Madhava Peraje

Tuesday, June 22, 2021

ಬಂಜಾರ ಕೇಂದ್ರದ ಪ್ರಗತಿ ವರದಿ:















 

Thursday, May 20, 2021

 ಕುವೆಂಪು ಭಾಷಾಭಾರತಿ ಪ್ರಾಧಿಕಾರ

ಒಳನುಡಿಗಳ ಒಳ್ನುಡಿ: ಜಾಲಗೋಷ್ಠ ಸರಣಿ

(ಕನ್ನಡ ಮತ್ತು ಒಳನುಡಿಗಳ ಬೆಸುಗೆ)

೨೫-೦೫-೨೦೨೧ ರಿಂದ  ೦೨-೦೬-೨೦೨೧ ರವರೆಗೆ ಪ್ರತಿದಿನ ಸಂಜೆ ೭.೦೦ ಕ್ಕೆ.























Thursday, April 8, 2021

 

ಕನ್ನಡ ಕಾಯಕ ವರ್ಷಾಚರಣೆ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ ೫೮೩೨೭೬

೨೯ ನೇ ನುಡಿಹಬ್ಬ ಘಟಿಕೋತ್ಸವ
೯ ಎಪ್ರಿಲ್ ೨೦೨೧ ಶಕ್ರವಾರ ಸಂಜೆ ೫:೩೦, ನವರಂಗ ಬಯಲು ರಂಗಮ0ದಿರ, ವಿದ್ಯಾರಣ್ಯ.







Tuesday, March 23, 2021

 ಕರ್ನಾಟಕ ಸರ್ಕಾರ ತಾಂಡ ಅಭಿವೃದ್ಧಿ ನಿಗಮ ಹಾಗೂ ಕನ್ನಡ ವಿಶ್ವವಿದ್ಯಾಲಯದ ಬಂಜಾರ ಭಾಷಾಭಿವೃದ್ಧಿ ಅಧ್ಯಯನ ಕೇಂದ್ರ ಮತ್ತು ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ಸಹಯೋಗದಲ್ಲಿ ನಡೆದಿರುವ “ಭಾಷಾಶಾಸ್ತಿçÃಯ ನೆಲೆಯಲ್ಲಿ ದಕ್ಷಿಣ ಭಾರತದ ಲಂಬಾಣಿ ಭಾಷೆ “ ಎಂಬ ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮದ ಛಾಯಾಚಿತ್ರಗಳು.















ದಿನಾಂಕ: ೦೪.೦೭.೨೦೨೨ ಬಂಜಾರ ಭಾಷಾಭಿವೃದ್ಧಿ ಅಧ್ಯಯನ ಕೇಂದ್ರದಲ್ಲಿ ಸಂಶೋಧನ ಸಹಾಯಕರ ತರಬೇತಿ ಕಾರ್ಯಾಗಾರ (ಬಂಜಾರ ಸಾಂಸ್ಕೃತಿಕ ಪದ ವಿವರಣಾಕೋಶ)ವನ್ನು ಮಾನ್ಯ ಕುಲಪತಿಗ...