ದಿನಾಂಕ: ೦೪.೦೭.೨೦೨೨ ಬಂಜಾರ ಭಾಷಾಭಿವೃದ್ಧಿ ಅಧ್ಯಯನ ಕೇಂದ್ರದಲ್ಲಿ ಸಂಶೋಧನ ಸಹಾಯಕರ ತರಬೇತಿ ಕಾರ್ಯಾಗಾರ (ಬಂಜಾರ ಸಾಂಸ್ಕೃತಿಕ ಪದ ವಿವರಣಾಕೋಶ)ವನ್ನು ಮಾನ್ಯ ಕುಲಪತಿಗಳು, ಮಾನ್ಯ ಕುಲಸಚಿವರು, ನಿರ್ದೇಶಕರು ಹಾಗೂ ಸಂಶೋಧನಾಧಿಕರಿಗಳು ಸಸಿ ನೆಡುವುದರ ಮೂಲಕ ಉದ್ಘಾಟಿಸಿದರು.
Banjara Bhashaadhyana Kendra, Kannada University,Hampi
ಕನ್ನಡ ವಿಶ್ವವಿದ್ಯಾಲಯ, ಹಂಪಿ ಬOಜಾರ ಭಾಷಾಭಿವೃದ್ಧಿ ಅಧ್ಯಯನ ಕೇಂದ್ರ ವಿದ್ಯಾರಣ್ಯ, ವಿಜಯನಗರ ಜಿಲ್ಲೆ-೫೮೩೨೭೬
Monday, July 4, 2022
Monday, February 14, 2022
ಬಂಜಾರ ಭಾಷಾಭಿವೃದ್ಧಿ ಅಧ್ಯಯನ ಕೇಂದ್ರ
ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿಜಯನಗರ ಜಿಲ್ಲೆ.
ಸಂತ ಶ್ರೀ ಸೇವಾಲಾಲ್ ಮಹಾರಾಜರ 283 ನೇ ಜಯಂತಿ
ದಿನಾಂಕ: 15.02.2022
ಇಂದು ದಿನಾಂಕ: 15.02.2022 ಇಡೀ ಲಂಬಾಣಿ ಸಮುದಾಯ ಹೆಮ್ಮೆ ಪಡುವ ಸುದಿನ ಏಕೆಂದರೆ ಬಂಜಾರ ಸಮುದಾಯದ ಸಮಾಜ ಸುಧಾರಕ ಆದಿಪುರುಷ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜನ್ಮದಿನ. ಈ ದಿನವನ್ನು ಸೇವಾಲಾಲ್‌ರನ್ನು ದೈವಸಂಭೂತನಾಗಿ ಎಲ್ಲೆಡೆ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಗುತ್ತಿದೆ. ಕ್ರಿ.ಶ 12 ನೇ ಶತಮಾನದ ಶರಣ ಚಳುವಳಿಯ ನಂತರ ಸೂಫಿಗಳು, ನಾಥಪಂಥ, ವಿರಕ್ತರು, ಆರೂಢರು ಕಂಡುಬರುತ್ತಾರೆ. ಇವರ ನಂತರದಲ್ಲಿ ಕೊಡೆಕಲ್ ಬಸವಣ್ಣ, ಮೊನಪ್ಪಯ್ಯ, ಫಕ್ಕೀರೇಶ, ಮಂಟೆಸ್ವಾಮಿ, ಮಾದೇಶ್ವರರ ಮೊದಲಾದ ಸಂತರು ಆಗಿಹೊಗಿದ್ದಾರೆ. ಈ ಸಾಲಿನಲ್ಲಿ ನಿಲ್ಲುವ ಮತ್ತೊಬ್ಬ ಮಾಹಾಪುರುಷ ಸಂತ ಶ್ರೀ ಸೇವಾಲಾಲ್ ಮಹಾರಾಜರಾಗಿದ್ದಾರೆ. ಕರ್ನಾಟಕದ ದಾವಣಗೆರೆ ಜಿಲ್ಲೆಯ ಹೊನ್ನಳ್ಳಿ ತಾಲೂಕಿನ ಸೂರಗೊಂಡನಕೊಪ್ಪ (ಭಾಯಾಗಡ್) ಎಂಬ ಗ್ರಾಮದಲ್ಲಿ 15 ಫೆಬ್ರವರಿ 1739 ರಲ್ಲಿ ಜನಿಸಿದರು. ಇವರ ಜನನದಿಂದ ಸಾವಿರಾರು ವರ್ಷಗಳಿಂದ ಅಲೆಮಾರಿಗಳಾಗಿ, ಅಜ್ಞಾನ, ಅಂಧಕಾರದ ಜೀವನ ಸಾಗಿಸುತಿದ್ದ ಬಂಜಾರ ಸಮುದಾಯದ ಮಾರ್ಗದರ್ಶಕರಾದವರು. ಇಂತಹ ಮಹಾಪುರುಷರು ಶರಣರು ಕಂಡ ಸಮಸಮಾಜದ ಚಿಂತನೆಯ ಪರಿಪಾಲಕರಾಗಿದ್ದರು. ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಿ, ತತ್ವ ಆದರ್ಶಗಳ ಅಡಿಯಲ್ಲಿ ಬದುಕನ್ನು ನಡೆಸುವಂತೆ ಜನರಿಗೆ ಮಾರ್ಗದರ್ಶನ ನೀಡಿದವರು.
ಸಮಾಜಮುಖಿ ಕಾರ್ಯಗಳೇ ಇವರ ದೈವತ್ವಕ್ಕೆ ಹಾಗೂ ಪವಾಡ ಪುರುಷನಾಗಿ ಪೂಜಿಸಲ್ಪಟ್ಟವರು. ಈ ಪವಾಡಗಳ ಉದ್ದೇಶವೇ ಸಮೂದಾಯದ ಉದ್ದಾರ ಹಾಗೂ ಸಮಾಜವನ್ನು ತಿದ್ದುವುದರ ಜೊತೆಗೆ ಅಸಮಾನತೆಯನ್ನು ಹೋಗಲಾಡಿಸಿ ಮಾಹಾತ್ಮರ ತತ್ವ ಆದರ್ಶಗಳಡಿಯಲ್ಲಿ ಬದುಕನ್ನು ನಡೆಸುವಂತೆ ಜನರಿಗೆ ತಿಳಿ ಹೇಳಿದರು. ಎಲ್ಲಾ ವರ್ಗದವರನ್ನು ಪ್ರೀತಿಸುವ, ಸಹಕರಿಸುವ ಮನೋಭಾವವು ಸಂತ ಶ್ರೀ ಸೇವಾಲಾಲ್ ಮಹಾರಾಜರ ಉದ್ದೇಶವಾಗಿತ್ತು.
ಜನರು ಸನ್ಮಾರ್ಗದಲ್ಲಿ ನಡೆಯಲು ತತ್ವಗಳನ್ನು ಹೇಳಿದರು:
೧. ಸುಳ್ಳನ್ನು ಹೇಳಬಾರದು.
೨. ಪ್ರಾಣಿ ಹಿಂಸೆ ಮಾಡಬಾರದು (ಅಹಿಂಸ ಪ್ರತಿಪಾದಕರಾಗಿದ್ದರು).
೩. ಕಾಯಕದ ಮಹತ್ವವನ್ನು ಸಾರಿದರು.
೪. ದುಃಖದಲ್ಲಿ ಇರುವವರನ್ನು ಕಾಪಾಡುವುದು.
೫. ಪ್ರೀತಿ ಸಹಕಾರ ಮನೋಭಾವನೆಗಳನ್ನು ಬೆಳೆಸಿಕೊಳ್ಳುವುದು.
ಎಂಬ ಅಂಶಗಳನ್ನು ಹೇಳುವುದರ ಮೂಲಕ ಎಲ್ಲಾ ಸಮುದಾಯದ ಜನಮಾನಸದಲ್ಲಿ ಆದರ್ಶಪುರುಷನಾಗಿ ಸಂತ ಶ್ರೀ ಸೇವಾಲಾಲ್‌ರು ನೆಲೆನಿಲ್ಲುತ್ತಾರೆ. ಇಂತಹ ಮಾಹಾನ್ ಮಾನವತವಾದಿಯ ತತ್ವ, ಆದರ್ಶ ಮತ್ತು ಚಿಂತನೆಗಳ ನೆಲೆಯಲ್ಲಿ ಎಲ್ಲಾ ಸಮುದಾಯಗಳು ಸಾಗಬೇಕಾಗಿದೆ.
Saturday, November 6, 2021
ದಿನಾಂಕ: ೩೦.೧೦.೨೦೨೧ ರಂದು ಬಂಜಾರ ಭಾಷಾಭಿವೃದ್ಧಿ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ಮಧ್ಯಾಹ್ನ ೨:೩೦ ಕ್ಕೆ ತಜ್ಞರ ಸಲಹಾ ಸಮಿತಿ ಸಭೆ ನಡೆಯಿತು.
ಸಭೆಯಲ್ಲಿ ಭಾಗವಹಿಸಿದವರು:
೧. ಡಾ. ಸ.ಚಿ. ರಮೇಶ, ಮಾನ್ಯ ಕುಲಪತಿಯವರು, ಕ.ವಿ.ಹಂ. :ಅಧ್ಯಕ್ಷರು
೨. ಶ್ರೀ. ಚಂದ್ರ ನಾಯ್ಕ.ಯು, ವ್ಯವಸ್ಥಾಪಕ ನಿರ್ದೇಶಕರು, :ವಿಶೇಷ ಆಹ್ವಾನಿತರು
ತಾಂಡಾ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು.
೩. ಡಾ. ಬಿ.ಕೆ. ರವೀಂದ್ರನಾಥ, ಪ್ರಾಧ್ಯಾಪಕರು, ಮೈಸೂರು :ಸದಸ್ಯರು
ವಿಶ್ವವಿದ್ಯಾಲಯ, ಮೈಸೂರು.
೪. ಡಾ. ಶಾಂತ ನಾಯ್ಕ, ಪ್ರಾಧ್ಯಾಪಕರು, ವಿಜಯನಗರ ಶ್ರೀ ಕೃಷ್ಣದೇವರಾಯ :ಸದಸ್ಯರು
ವಿಶ್ವವಿದ್ಯಾಲಯ, ಬಳ್ಳಾರಿ.
೫. ಡಾ. ಡಿ. ಪಾಂಡುರ0ಗಬಾಬು, ಮುಖ್ಯಸ್ಥರುಕನ್ನಡ ಭಾಷಾಧ್ಯಯನ :ಸದಸ್ಯರು
ವಿಭಾಗ,ಕವಿಹಂ.
೬. ಡಾ. ಅಶೋಕಕುಮಾರ್ ರಂಜೇರೆ, ಪ್ರಾಧ್ಯಾಪಕರು, ಭಾಷಾಧ್ಯಯನ :ಸದಸ್ಯರು
ವಿಭಾಗ,ಕವಿಹಂ.
೭. ಡಾ. ಪಿ. ಮಹಾದೇವಯ್ಯ, ಪ್ರಾಧ್ಯಾಪಕರು, ಭಾಷಾಧ್ಯಯನ :ಸದಸ್ಯರು
ವಿಭಾಗ, ಕವಿಹಂ.
೮. ಡಾ.ಎಸ್.ವೈ.ಸೋಮಶೇಖರ್, ಉಪಕುಲಸಚಿವರು(ಶೈಕ್ಷಣಿಕ), ಕವಿಹಂ. :ಸದಸ್ಯರು
೯. ಡಾ. ರಮೇಶ ನಾಯ್ಕ, ಯೋಜನ ಸಂಯೋಜಕರು, ತಾಂಡಾ :ವಿಶೇಷ ಆಹ್ವಾನಿತರು
ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು.
೧೦. ಡಾ. ಸಣ್ಣರಾಮ, ನಿರ್ದೇಶಕರು, ಬಂಜಾರ ಭಾಷಾಭಿವೃದ್ಧಿ :ಸದಸ್ಯ ಸಂಚಾಲಕರು
ಅಧ್ಯಯನಕೇ0ದ್ರ, ಕವಿಹಂ.
ಗೈರಾದವರು:
೦೧. ಡಾ. ರೇಣುಕ ನಾಯ್ಕ, ಸಹಾಯಕ ಪ್ರಾಧ್ಯಾಪಕರು, ಕೇಂದ್ರಿಯ :ಸದಸ್ಯರು
ವಿಶ್ವವಿದ್ಯಾಲಯ, ಕಲಬುರ್ಗಿ.
Tuesday, October 26, 2021
ದಿನಾಂಕ: ೦೪.೦೭.೨೦೨೨ ಬಂಜಾರ ಭಾಷಾಭಿವೃದ್ಧಿ ಅಧ್ಯಯನ ಕೇಂದ್ರದಲ್ಲಿ ಸಂಶೋಧನ ಸಹಾಯಕರ ತರಬೇತಿ ಕಾರ್ಯಾಗಾರ (ಬಂಜಾರ ಸಾಂಸ್ಕೃತಿಕ ಪದ ವಿವರಣಾಕೋಶ)ವನ್ನು ಮಾನ್ಯ ಕುಲಪತಿಗ...
-
ಪ್ರಪಂಚದಲ್ಲಿ ಭಾಷೆಗಾಗಿಯೇ ಇರುವ ಏಕೈಕ ವಿಶ್ವವಿದ್ಯಾಲಯವೆಂಬ ಹೆಮ್ಮೆಯೊಂದಿಗೆ ಹುಟ್ಟಿಕೊಂಡ ಕನ್ನಡ ವಿಶ್ವವಿದ್ಯಾಲಯ ಕನ್ನಡದ ಬದುಕಿನ ವಿವೇಕದಂತೆ ಕೆಲಸಮಾಡಿದೆ. ಕರ...
-
ಕುವೆಂಪು ಭಾಷಾಭಾರತಿ ಪ್ರಾಧಿಕಾರ ಒಳನುಡಿಗಳ ಒಳ್ನುಡಿ: ಜಾಲಗೋಷ್ಠ ಸರಣಿ (ಕನ್ನಡ ಮತ್ತು ಒಳನುಡಿಗಳ ಬೆಸುಗೆ) ೨೫-೦೫-೨೦೨೧ ರಿಂದ ೦೨-೦೬-೨೦೨೧ ರವರೆಗೆ ಪ್ರತಿದಿನ ಸಂಜೆ...
-
ಪ್ರಗತಿ ಪರಿಶೀಲನ ಸಭೆ: ಬಂಜಾರ ಭಾಷೆ ಅಭಿವೃದ್ಧಿ ಅಧ್ಯಯನ ಕೇಂದ್ರದಲ್ಲಿ ದಿನಾಂಕ: ೨೫.೦೬.೨೦೨೧ ರಂದು ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಮಾನ್ಯ ವ್ಯವಸ್ಥಾಪಕ ನಿರ್ದೇಶ...